ಸಿಎಂ ಸ್ಥಾನಕ್ಕೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ

ಒಂದೆಡೆ ಸಿಎಂ ಹುದ್ದೆಯ ಆಕಾಂಕ್ಷಿತನದ ಬಗ್ಗೆ ಮಾತನಾಡಬಾರದು ಎಂದು ಕರ್ನಾಟಕದ ಕಾಂಗ್ರೆಸ್​ ನಾಯಕರಿಗೆ ಸೂಚನೆ ನೀಡಬೇಕು ಎಂದು ಕೋರಿ ರಾಜ್ಯದ ಕೆಲವು ನಾಯಕರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ತಾವೂ ಸಿಎಂ ಆಗಲು ರೆಡಿ ಎಂದಿದ್ದಾರೆ.