ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಮೊದಲ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ. ಈಗ ಹರಿಪ್ರಿಯಾ ಅವರಿಗೆ 9 ತಿಂಗಳು ತುಂಬಿದ್ದು, ಖಾಸಗಿ ರೆಸಾರ್ಟ್ನಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಈ ಸಮಾರಂಭಕ್ಕೆ ಹಿರಿಯ ನಟಿ ತಾರಾ ಅನುರಾಧ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಸಾಕ್ಷಿ ಆಗಿದ್ದಾರೆ. ಹರಿಪ್ರಿಯಾಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ.