ಬಜೆಟ್​ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್​ಗೆ ಮೊಸರು-ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 8ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆಯಾಗಲಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮೊಸರು-ಸಕ್ಕರೆ (ದಹಿ-ಚೀನಿ) ತಿನ್ನಿಸುವ ಮೂಲಕ ಶುಭ ಹಾರೈಸಿದರು. ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿಯನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಸಾಂಪ್ರದಾಯಿಕವಾಗಿ ದ್ರೌಪದಿ ಮುರ್ಮು ಮೊಸರು-ಸಕ್ಕರೆ ತಿನ್ನಿಸಿದರು. ಇದು ಯಶಸ್ವಿ ಬಜೆಟ್ ಪ್ರಸ್ತುತಿಗಾಗಿ ಅದೃಷ್ಟ ಮತ್ತು ಆಶೀರ್ವಾದವನ್ನು ಸಂಕೇತಿಸುತ್ತದೆ. ಪ್ರತಿ ಬಾರಿ ಬಜೆಟ್ ಮಂಡನೆ ವೇಳೆಯೂ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ.