ದೀಪಾವಳಿ, ಕನ್ನಡ ರಾಜ್ಯೋತ್ಸವ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧೆಡೆ ತಮ್ಮ ಊರುಗಳಿಗೆ ತೆರಳಿದ್ದ ಲಕ್ಷಾಂತರ ಜನ ಬೆಂಗಳೂರಿಗೆ ವಾಪಸಾಗಲು ಪರದಾಡಿದರು. ಕೆಎಸ್ಆರ್ಟಿಸಿ ಹೆಚ್ಚುವರಿಯಾಗಿ ನೂರಾರು ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದ್ದರೂ ಬಸ್ ನಿಲ್ದಾಣಗಳಲ್ಲಿ, ಬಸ್ಗಳಲ್ಲಿ ವಿಪರೀತ ಜನಜಂಗುಳಿ, ನೂಕುನುಗ್ಗಲು ಕಾಣಿಸಿತು.