ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಧ್ಯೆ ಇರೋ ಸಂಬಂಧ ಎಂಥದ್ದು ಎಂಬ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಅವರ ಕಡೆಯಿಂದಲೂ ಸ್ಪಷ್ಟನೆ ಇಲ್ಲ. ಇಬ್ಬರೂ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಹಿಗಿರುವಾಗಲೇ ಇಬ್ಬರೂ ಒಟ್ಟಾಗಿ ‘ಮತ್ತೆ ಮದುವೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಮೇ 26ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆದಿದೆ. ‘ನೀವಿಬ್ಬರೂ ಗೆಳೆಯರೇ ಅಥವಾ ಅದಕ್ಕಿಂತಲೂ ಹೆಚ್ಚೇ’ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ನರೇಶ್, ‘ನಮ್ಮ ಹೃದಯಗಳ ಮಧ್ಯೆ ಮದುವೆ ಆಗಿದೆ, ನಾವು ಖುಷಿಯಿಂದ ಇದ್ದೇವೆ’ ಎಂದಿದ್ದಾರೆ.