ಹಾಸನಾಂಬೆ ದೇಗುಲದ ವಿವಿಐಪಿ ಗೇಟ್ ತಳ್ಳಿ ಜನರು ನುಗ್ಗಿದ್ದ ಹಿನ್ನೆಲೆ ಆಕ್ರೋಶಗೊಂಡ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಸಕಲೇಶಪುರದ ಸಹಾಯಕ ಆಯುಕ್ತರಾಗಿರುವ ಶಿಲ್ಪಾ ಅವರಿಗೆ ಹೊಡೆದಿದ್ದಾರೆ. ಶಾಸಕ ಸಿಮೆಂಟ್ ಮಂಜು ಅವರು ದೇಗುಲದ ಒಳಗೆ ಪ್ರವೇಶಿಸುತ್ತಿದ್ದಂತೆ ಶಾಸಕರ ಜೊತೆ ಗೇಟ್ ತಳ್ಳಿ ಜನರು ಒಳಗೆ ನುಗ್ಗಿದ್ದಾರೆ. ಈ ವೇಳೆ ಗರಂ ಆದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಕೈಗೆ ಹೊಡೆದು ಸುಮ್ಮನಿರುವಂತೆ ಗದರಿಸಿ ಹೇಳಿದರು.