ಚೆಸ್ ಒಲಿಂಪಿಯಾಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಚದುರಂಗದ ಚತುರರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಭಾರತದ ಪುರುಷ ಚೆಸ್ ತಂಡದ ಆಟಗಾರರು ಪ್ರಧಾನಿ ಸಮ್ಮುಖದಲ್ಲಿ ಚದುರಂಗ ಆಟವನ್ನೂ ಸಹ ಆಡಿದರು. ಆ ಬಳಿಕ ಎಲ್ಲಾ ಆಟಗಾರರೊಂದಿಗೆ ಮೋದಿ ಸಂವಾದ ನಡೆಸಿದರು.