ಒಂದೇ ಓವರ್​ನಲ್ಲಿ ಅಟ್ಕಿನ್ಸನ್​ರನ್ನು ಅಟ್ಟಾಡಿಸಿದ ಸಂಜು

ಅಟ್ಕಿನ್ಸನ್ ಅವರ ಮೊದಲ ಎರಡು ಎಸೆತಗಳಲ್ಲಿ ಸಂಜು ಬೌಂಡರಿ ಬಾರಿಸಿದರು. ಮೂರನೇ ಚೆಂಡು ಡಾಟ್ ಆಗಿತ್ತು. ಇದಾದ ನಂತರ ಸ್ಯಾಮ್ಸನ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆ ಬಳಿಕ ಐದು ಮತ್ತು ಆರನೇ ಎಸೆತಗಳಲ್ಲಿ ಬೌಂಡರಿ ಗಳಿಸಿದರು. ಈ ಮೂಲಕ ಸಂಜು ಒಂದೇ ಓವರ್‌ನಲ್ಲಿ ಒಟ್ಟು 22 ರನ್ ಕಲೆಹಾಕಿದರು.