ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಜನರನ್ನು ಸ್ಪಂದನ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಬರಮಾಡಿಕೊಳ್ಳುತ್ತಿದ್ದರೆ, ಬೀಗರ ಮನೆಯಲ್ಲಿದ್ದರೂ ಚಿನ್ನೇಗೌಡರು ಊಟೋಪಚಾರ ನೋಡಿಕೊಳ್ಳುತ್ತಿದ್ದರು. ಹೃದಯದಲ್ಲಿ ದುಃಖ ಮಡುಗಟ್ಟಿದ್ದರೂ ಇಳಿ ವಯಸ್ಸಿನ ಚಿನ್ನೇಗೌಡರು ಲವಲವಿಕೆಯಿಂದ ಓಡಾಡುತ್ತಿದ್ದುದನ್ನು ವಿಡಿಯೋದಲ್ಲಿ ನೋಡಬಹುದು.