ಅಂತು ಇಂತು ತಡವಾಗಿ ಬಂದ ರೈಲು: ನಿಟ್ಟುಸಿರು ಬಿಟ್ಟ ಹೋಂ ಗಾರ್ಡ್ಸ್

ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಹೋಂ ಗಾರ್ಡ್​ಗಳು ರೈಲು ಬಾರದ್ದಕ್ಕೆ ರಾತ್ರಿ ಇಡೀ ಯಾದಗಿರಿ ರೈಲ್ವೆ ನಿಲ್ದಾಣದಲ್ಲೇ ಮಲಗಿರುವಂತಹ  ಘಟನೆ ನಡೆದಿದೆ. ನ. 17 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆ ಯಾದಗಿರಿ ಜಿಲ್ಲೆಯ 200 ಗೃಹ ರಕ್ಷಕರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.