ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಹಸ್ತಲಾಘವ

ಲೋಕತಂತ್ರ ಅಥವಾ ಪ್ರಜಾಪ್ರಭುತ್ವದ ಸೊಬಗೇ ಅದು. ಚುನಾವಣಾ ಪ್ರಚಾರದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾರೆ. ಆದರೆ, ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಳ್ಳುವ ವಿಧಾನಸೌಧ ಮತ್ತು ಸಂಸತ್ ಭವನದಲ್ಲಿ ಚುನಾಯಿತ ಸದಸ್ಯರು ಜನ ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡುತ್ತಾರೆ.