ಹಾಸನ ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿ: ದಿಡೀರ್ ಸುರಿದ ಮಳೆಗೆ ಹೈರಾಣಾದ ಭಕ್ತರು

ಬೇಡಿದ ವರವ ಕರುಣಿಸುವ, ಕಷ್ಟಗಳನ್ನ ನಿವಾರಣೆ ಮಾಡುವ, ವರ್ಷಕ್ಕೊಮ್ಮೆ ದರ್ಶನ ಕರುಣಿಸೋ ಶಕ್ತಿದೇವತೆ ಹಾಸನಾಂಬೆಯ ಮೂರನೇ ದಿನದ ಸಾರ್ವಜನಿಕ ದರ್ಶನಕ್ಕೆ ಇಂದು ಭಕ್ತಸಾಗರವೇ ಹರಿದು ಬಂದಿತ್ತು. ಭಾನುವಾರದ ರಜೆಯ ಕಾರಣದಿಂದ ರಾಜ್ಯದ ಮೂಲೆ ಮೂಲೆಗಳಿಂದಲೂ ಹಾಸನದತ್ತ ಭಕ್ತ ಸಮೂಹ ಲಗ್ಗೆಯಿಟ್ಟಿತ್ತು. ಆದರೆ ಮಧ್ಯಾಹ್ನದ ವೇ‌ಳೆ‌ಗೆ ದಿಢೀರ್​ ಮಳೆ ಸುರಿದ ಪರಿಣಾಮ ಭಕ್ತರು ಹೈರಾಣಾಗಿದ್ದಾರೆ.