ಬಿಗ್ ಬಾಸ್ ಸ್ಪರ್ಧಿ ಮತ್ತು ನಟ ವಿನಯ್ ಗೌಡ

ವಿಡಿಯೋದಲ್ಲಿ ವಿನಯ್ ತಮ್ಮ ಅಭಿಮಾನಿಗಳ ಕ್ಷಮೆಯನ್ನೂ ಕೇಳಿದ್ದಾರೆ ಮತ್ತು ತಾನು 18 ಸೆಕೆಂಡುಗಳ ರೀಲ್ಸ್ ಗಾಗಿ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು, ಅದು ಅಸಲಿಗೆ ತನಗೆ ಸೇರಿದ ಪ್ರಾಪರ್ಟಿಯಾಗಿರಲಿಲ್ಲ ಎಂದಿದ್ದಾರೆ. ರಜತ್ ಗೆ ಮಚ್ಚು ನೀಡಿದ್ದರೆ ಪುಷ್ಪಾ ಕ್ಯಾರೆಕ್ಟರ್ ಅಗಿದ್ದ ತನಗೆ ಕೊಟ್ಟ ಪ್ರಾಪರ್ಟಿ ಪಾನ್ ಬೀಡಾ ಆಗಿತ್ತು; ಅದೇನೇ ಆಗಿರಲಿ, ತನ್ನೊಂದಿಗೆ ನಿಂತು ಪ್ರೀತಿ ವಿಶ್ವಾಸಗಳನ್ನು ತೋರಿದ ಅಭಿಮಾನಿಗಳಿಗೆ ಕೃತಜ್ಞತೆಗಳು ಅಂತ ವಿನಯ್ ಹೇಳಿದ್ದಾರೆ.