ದರ್ಶನ್ ಹೊರಗೆ ಬಂದ್ರೆ ನಮಗೆ ಖುಷಿ, ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ: ಗುರು ಕಿರಣ್

ಚಿತ್ರರಂಗದಲ್ಲಿ ದರ್ಶನ್​ ಮತ್ತು ಗುರು ಕಿರಣ್​ ಜೊತೆಯಾಗಿ ಕೆಲಸ ಮಾಡಿದವರು. ಆ ಹಿನ್ನೆಲೆಯಲ್ಲಿ ಗುರು ಕಿರಣ್​ ಅವರು ದರ್ಶನ್​ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಸ್ನೇಹಿತನಾಗಿ ದರ್ಶನ್​ ಹೊರಗೆ ಬರಬೇಕು ಅಂತ ನಾವು ಹೇಳುತ್ತೇವೆ. ಆದರೆ ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ಪೊಲೀಸ್​ನವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ’ ಎಂದಿದ್ದಾರೆ ಗುರು ಕಿರಣ್​.