ಹಾಸನ: ರಸ್ತೆ ಮಧ್ಯೆ ನಿಂತ ಪೊಲೀಸ್ ಬೆಂಗಾಲು ವಾಹನ; ಗರಂ ಆದ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ

ಬೆಂಗಾಲು ವಾಹನದ ಪೊಲೀಸರ ಮೇಲೆ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಗುರಂ ಆದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಳೇಕೋಟೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಕೇಂದ್ರ ಸಚಿವರು, ಹರದನಹಳ್ಳಿ ಮಾರ್ಗವಾಗಿ ಹೋಗುವಾಗ ಹೆಚ್​ಡಿ ರೇವಣ್ಣ ಅವರನ್ನು ಕಂಡು ಬೆಂಗಾವಲು ಪಡೆ ಪೊಲೀಸರು ವಾಹನವನ್ನು ನಿಲ್ಲಿಸಿದ ಹಿನ್ನೆಲೆ ಕೇಂದ್ರ ಸಚಿವರು ಕುಪಿತಗೊಂಡರು.