ಎರಡೂವರೆ ವರ್ಷಕ್ಕೆ CM ಸೇರಿ ಇಡೀ ಟೀಂ ಚೇಂಜ್ ಆಗುತ್ತೆ ಎಂದ ಕಾಂಗ್ರೆಸ್ ಶಾಸಕ ವಿನಯ್​ ಕುಲಕರ್ಣಿ

ವಿಜಯಪುರ: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದವರಿಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ವಿಜಯಪುರದಲ್ಲಿ ಕೈ ಶಾಸಕ ವಿನಯ ಕುಲಕರ್ಣಿ (Dharwad Congress MLA Vinay kulkarni) ಮಾತನಾಡಿದ್ದಾರೆ. ಎರಡೂವರೆ ವರ್ಷದ ಬಳಿಕ ಟೀಂ ಪೂರ್ತಿ ಬದಲಾಗಲಿದೆ ಎಂದು ಕೈ ಶಾಸಕ ಬಾಂಬ್ ಸಿಡಿಸಿದ್ದಾರೆ. ಭವಿಷ್ಯದಲ್ಲಿ ಪಕ್ಷ ಮುಂದೆ ಬರುವಂತಹ ಚಾನ್ಸ್ ಸಾಕಷ್ಟು ಇದೆ, ಇಷ್ಟೊಂದು ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿದ್ದಾರೆ. ನಿರೀಕ್ಷೆಯನ್ನೂ ಮೀರಿ 135 ಶಾಸಕರಾಗಿದ್ದಾರೆ, ಅಲ್ಲದೆ ಮೂರ್ನಾಲ್ಕು ಜನ ಕೋ‌ ಮೇಂಬರ್ಸ್ ಇದ್ದಾರೆ. ಕೇವಲ 34 ಜನರಿಗೆ ಮಾತ್ರ ಮಂತ್ರಿ ಮಾಡಲು ಸಾಧ್ಯ, ಹಾಗಾಗಿ ಎಲ್ಲರಿಗೂ ಮಂತ್ರಿ ಸ್ಥಾನ ಕೊಡೊಕೆ ಆಗಿಲ್ಲ ಎಂದು ಧಾರವಾಡ ಶಾಸಕ ವಿನಯ ಕುಲಕರ್ಣಿ ಸಚಿವ ಕೆಎಚ್​​ ಮುನಿಯಪ್ಪ ಹೇಳಿಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ