ರಾಜೇಂದ್ರ ಕೊಲೆ ಸಂಚಿನ ಸ್ಫೋಟಕ ಆಡಿಯೋ ಬಹಿರಂಗ

ಸಚಿವ ಕೆಎನ್​ ರಾಜಣ್ಣ ಅವರ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ಕೊಲೆ ಸಂಚಿಗೆ ಸಂಬಂಧಿಸಿದ ಸ್ಫೋಟಕ ಆಡಿಯೋ ಈಗ ಬಹಿರಂಗವಾಗಿದೆ. ಆಡಿಯೋದಲ್ಲಿ ಅನೇಕ ಆಘಾತಕಾರಿ ಸಂಗತಿಗಳು ಬಯಲಾಗಿವೆ. ರಾಜೇಂದ್ರ ಕೊಲೆಗೆ ಹೇಗೆ ಸಂಚು ನಡೆದಿತ್ತು? ಎಷ್ಟು ಹಣ ನೀಡಲಾಗಿತ್ತು? ಇನ್ನೆಷ್ಟು ನೀಡುವ ಭರವಸೆ ನೀಡಲಾಗಿತ್ತು ಎಂಬ ಎಲ್ಲ ಮಾಹಿತಿ ಆಡಿಯೋದಲ್ಲಿವೆ.