2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಮುಖಂಡರ ಹೋರಾಟ ತೀವ್ರಗೊಂಡಿದೆ. ಬೆಳಗಾವಿ ಲಾಠಿಚಾರ್ಜ್ ಖಂಡಿಸಿ ಗದಗದಲ್ಲಿ ನಡೆದ ಪ್ರತಿಭಟನೆ ವೇಳೆ ಹೈಡ್ರಾಮಾ ನಡೆದಿದೆ. ಟಯರ್ಗೆ ಬೆಂಕಿ ಹಚ್ಚುವ ವೇಳೆ ಪ್ರತಿಭಟನಾಕಾರರೊಬ್ಬರ ಕಾಲಿಗೆ ಬೆಂಕಿ ಹೊತ್ತಿಕೊಂಡ ಘಟನೆಯೂ ನಡೆಯಿತು. ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕುನುಗ್ಗಲು, ತಳ್ಳಾಟ ನಡೆಯಿತು.