ಆನೇಕಲ್, ಅ.5: ಸಿಲಿಕನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಸಮಸ್ಯೆಗಳಿಂದಾಗಿ ವಾಹನ ಸವಾರರಿಗೆ ಗಂಡಾಂತರ ಎದುರಾಗುತ್ತಲೇ ಇವೆ. ಅಲ್ಲೊಂದು ಇಲ್ಲೊಂದು ಅಪಘಾತಗಳು ನಡೆಯುತ್ತಲೇ ಇವೆ. ಇದೀಗ ಸರ್ಜಾಪುರದ-ದೊಮ್ಮಸಂದ್ರ ಸರ್ಕಲ್ ಬಳಿ ಸಂಪೂರ್ಣವಾಗಿ ಹದಗೆಟ್ಟ ರಸ್ತೆಯಲ್ಲಿ ಬೈಕ್ ಪಲ್ಟಿಯಾದ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.