ಮೋನಿಕ ಸತ್ಯ, ಕಾಶ್ಮೀರದಿಂದ ವಾಪಸ್ಸಾಗಿರುವ ಬೆಂಗಳೂರು ನಿವಾಸಿ

ತಾವು ಸುರಕ್ಷಿತವಾಗಿ ಕರ್ನಾಟಕಕ್ಕೆ ವಾಪಸ್ಸು ಹೋಗುತ್ತೇವೆಯೋ ಇಲ್ಲವೋ ಎಂಬ ಸಂದೇಹ ತಮ್ಮ ತಂಡವನ್ನು ಕಾಡಲಾರಂಭಿಸಿತ್ತು ಎಂದು ಮೋನಿಕ ಹೇಳುತ್ತಾರೆ. ಬೆಂಗಳೂರಲ್ಲಿ ಕಾಲಿಟ್ಟ ನಂತರ ನಿರಾಳರಾಗಿರುವ ಅವರು ಕರ್ನಾಟಕ ಮತ್ತು ಬೆಂಗಳೂರಷ್ಟು ಒಳ್ಳೇ ಮತ್ತು ಸುಂದರ ಸ್ಥಳಗಳು ಬೇರೆಲ್ಲೂ ಇಲ್ಲ, ಇಲ್ಲಿನ ಜನ ಕೂಡ ಬಹಳ ಚೆನ್ನಾಗಿದ್ದಾರೆ ಎಂದು ಹೇಳುತ್ತಾರೆ.