ಪುದುಚೇರಿ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳದ ಮುಖ್ಯಮಂತ್ರಿಗಳು ಮಾತ್ರ ನೀತಿ ಆಯೋಗದ ಸಭೆಯಲ್ಲಿ ಗೈರುಹಾಜರಾಗಿದ್ದರು. ಉಳಿದೆಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಈ ವೇಳೆ ಪಕ್ಷಭೇದ ಮರೆತು ಎಲ್ಲ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಬಹಳ ಆತ್ಮೀಯತೆಯಿಂದ ಚಹಾ ಹೀರುತ್ತಾ, ಕೈ ಕುಲುಕುತ್ತಾ, ಪರಸ್ಪರ ಅಪ್ಪಿಕೊಂಡು ಮಾತುಕತೆ ನಡೆಸಿದ್ದಾರೆ.