ತನ್ನಣ್ಣ ಸತ್ತು 7 ದಿನ ಕಳೆದರೂ ಪೊಲೀಸರಿಂದಾಗಲೀ ಸರ್ಕಾರದ ಪ್ರತಿನಿಧಿಗಳಿಂದಾಗಲೀ ಇದುವರೆಗೆ ಒಂದೇ ಒಂದು ಅಪ್ಡೇಟ್ ಸಿಕ್ಕಿಲ್ಲ, ಅವನು ಡೆತ್ ನೋಟ್ನಲ್ಲಿ ಕೆಲವು ಹೆಸರುಗಳನ್ನು ಬರೆದಿದ್ದಾನೆ, ಆದರೆ ಪೊಲೀಸರು ಅವರನ್ನು ವಿಚಾರಿಸುವ ಬದಲು ತಮ್ಮಲ್ಲಿಗೆ ಬಂದು ನೂರೆಂಟು ಪ್ರಶ್ನೆ ಕೇಳುತ್ತಾರೆ, ಅವನ ಐಫೋನ್ ನಾಪತ್ತೆಯಾಗಿದೆ, ಅದರಲ್ಲಿದ್ದ ವಿವರಗಳನ್ನು ಅಳಸಿರಬಹುದು ಎಂದು ಸಚಿನ್ ಸಹೋದರಿ ಹೇಳುತ್ತಾರೆ.