ಊಟಕ್ಕಾಗಿ ಮತದಾನವನ್ನೇ ನಿಲ್ಲಿಸಿದ ಸಿಬ್ಬಂದಿ

ಚುನಾವಣಾ ಸಿಬ್ಬಂದಿಗಳು ಊಟ ಮಾಡಲು ಮತದಾನ ಸ್ಥಗಿತಗೊಳಿಸಿದ್ದು, ಸ್ಥಳೀಯರ ಆಕ್ರೋಶ ಕಾರಣವಾಗಿರುವಂತಹ ಘಟನೆ ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಕುಮಾರೇಶ್ವರನಗರ, ಮೂಕಾಂಬಿಕಾನಗರ, ನೀರಾವರಿ ಕ್ವಾರ್ಟರ್ಸ್‌ಗೆ ಸಂಬಂಧಿಸಿದ ಮತಗಟ್ಟೆ ಸಂಖ್ಯೆ 180ರಲ್ಲಿ ನಡೆದಿದೆ. ಆ ಮೂಲಕ ಚುನಾವಣಾ ಸಿಬ್ಬಂದಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಸಿಬ್ಬಂದಿ ಊಟ ಮುಗಿಯುವವರೆಗೆ ಮತದಾರರು ಮತಗಟ್ಟೆ ಹೊರಗಡೆ ಕಾದು ನಿಂತಿದ್ದರು.