ಕಾರ್ಯಕರ್ತರು ಯಾವುದೇ ಬಗೆಯ ಭಿನ್ನಮತ, ಅಸಮಾಧಾನ ಇಟ್ಟಕೊಳ್ಳದೆ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಕೃಷ್ಣರಾಜ ಕ್ಷೇತ್ರದಲ್ಲಿ ಹೆಚ್ಚು ಬಡವರಿದ್ದಾರೆ, ತಮ್ಮ ಸರ್ಕಾರ ಬಡವರನ್ನು ಅವರ ಧರ್ಮ, ಜಾತಿ, ರಾಜಕೀಯ ಪಕ್ಷದೆಡೆಗಿನ ಒಲವು-ಮೊದಲಾದ ಯಾವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳದೆ ನೆರವಾಗುವ ಪ್ರಯತ್ನ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.