ಹಿರಿಯ ನಟಿ ಲೀಲಾವತಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ಧ್ವಜಾರೋಹಣ ಮಾಡಿದ್ದಾರೆ. ಅವರಿಗೆ ಇಗ 86 ವರ್ಷ ವಯಸ್ಸು. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಸದ್ಯ ಅವರು ವ್ಹೀಲ್ ಚೇರ್ನಲ್ಲಿ ಇದ್ದಾರೆ. ಈ ಪರಿಸ್ಥಿತಿಯಲ್ಲೂ ಕೂಡ ಅವರಿಗೆ ಕನ್ನಡದ ಮೇಲಿನ ಪ್ರೇಮ ಕಡಿಮೆ ಆಗಿಲ್ಲ. ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವ್ಹೀಲ್ ಚೇರ್ನಲ್ಲಿಯೇ ಬಂದು ಅವರು ಧ್ವಜಾರೋಹಣ ಮಾಡಿರುವುದು ವಿಶೇಷ. ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಅವರು ಲೀಲಾವತಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ನಟ ವಿನೋದ್ ರಾಜ್ ಕೂಡ ಭಾಗಿ ಆಗಿದ್ದರು. ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಪ್ರಮೀಳಾ ಜೋಶಾಯ್, ಭಾ.ಮ. ಹರೀಶ್ ಮುಂತಾದವರು ಕೂಡ ಉಪಸ್ಥಿತರಿದ್ದರು.