ಶಿಲ್ಪಿ ಅರುಣ್​ ಯೋಗಿರಾಜ್​ರನ್ನು ಸ್ವಾಗತಿಸಲು ಬಂದ ರಾಮ ಭಕ್ತರು

ಅಯೋಧ್ಯೆ ಬಾಲರಾಮನ ಮೂರ್ತಿಯ ಕೆತ್ತನೆ ಮಾಡಿದ ಶ್ರೀ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯಿಂದ ಕರ್ನಾಟಕಕ್ಕೆ ಹೊರಟಿದ್ದು, ಇಂದು ಸಂಜೆ 5.30 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಆಗಮಿಸಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಹಿಂದೂ ಸಮಾಜದ ಮುಖಂಡರು ಮತ್ತು ಪ್ರಮುಖರು ಅವರಿಗೆ ಭವ್ಯ ಸ್ವಾಗತ ಕೋರಲಿದ್ದಾರೆ.