ಆರ್ಸಿಬಿ ರಾಜ್ಯದ ಅಥವಾ ದೇಶದ ಒಂದು ತಂಡವಲ್ಲ, ಖಾಸಗಿ ಸಂಸ್ಥೆಯೊಂದರ ಕ್ಲಬ್ ಅದು. ಕ್ಲಬ್ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಯಾರೂ ಬೇಕಾದರೂ ಇಟ್ಟುಕೊಳ್ಳಬಹುದು. ಅದರೆ ಸರ್ಕಾರೀ ಖರ್ಚಿನಲ್ಲಿ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನ ಇಟ್ಟುಕೊಳ್ಳೋದು, ಅದರಲ್ಲಿ ಭಾಗಿಯಾಗೋದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.