ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ

ಕಲ್ಲಪ್ಪ ತಳವಾರ ಎಂಬ ಯುವಕ ಜಾತ್ರೆಗೆ ಹೆಲ್ಮೆಟ್ ಹಾಕಿಕೊಂಡು 500 ನೋಟುಗಳ ಅಂಗಿತೊಟ್ಟು ಆಗಮಿಸಿದ್ದನು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿತ್ರಭಾನುಕೊಟಿ ಗ್ರಾಮದಲ್ಲಿ ನಡೆದ ಸಚ್ಚಿದಾನಂದ ಸಹಜಾನಂದ ರಾಮಾರೂಢ ಸ್ವಾಮೀಜಿಯವರ ಮಹಾರಥೋತ್ಸವಕ್ಕೆ ಯುವಕ ಕಲ್ಲಪ್ಪ ತಳವಾರ ಈ ರೀತಿಯಾಗಿ ಬಂದಿದ್ದನು.