ಹುಚ್ಚು ಸಾಹಸಗಳನ್ನು ಪ್ರದರ್ಶಿಸುವ ಪ್ರವಾಸಿಗರು ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದರ ಜೊತೆಗೆ ತಮ್ಮ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸಸುವ ಮೂಲಕ ಇಲ್ಲಿಂದ ಹೋಗುವ ಇತರರಿಗೂ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಇಲ್ಲಿಯ ರಸ್ತೆಗಳು ಕಿರಿದಾಗಿವೆ ಮತ್ತು ಒಂದು ಪಕ್ಕ ಪ್ರಪಾತ. ಮಳೆಯಿಂದ ಕೆಸರಾಗಿರುವ ರಸ್ತೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಯಾರು ಹೊಣೆ?