ಮುನಿಸಿಕೊಂಡಿರುವ ರಾಮಣ್ಣ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸೋಲಿಗೆ ಕಾರಣರಾಗುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ತೇಲಾಡುತ್ತಿದೆ. ಆದರೆ ಯೋಗೇಶ್ವರ್ ತನ್ನಿಂದಲೇ ಗೆಲ್ಲೋದು, ಶಿವಕುಮಾರ್ ಜೊತೆ ಯೋಗೇಶ್ವರ್ ಸಹ ತನ್ನ ನಾಯಕ ಎನ್ನುವ ರಾಮಣ್ಣ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಡಿಕೆ ಸುರೇಶ್ ಅವರ ವೋಟ್ ಶೇರನ್ನು 15 ಸಾವಿರದಿಂದ 87 ಸಾವಿರಕ್ಕೆ ಹೆಚ್ಚಿಸಿದನ್ನು ವಿವರಿಸುತ್ತಾರೆ.