‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್

ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಹೊರಗೆ ಬಂದಿದ್ದಾರೆ. ಮಧ್ಯಂತರ ಜಾಮೀನು ಸಿಕ್ಕಿರುವುದಕ್ಕೆ ದರ್ಶನ್ ಅವರ ಆಪ್ತರಿಗೆ ಸಂತಸ ಆಗಿದೆ. ನಿರ್ದೇಶಕ ತರುಣ್ ಸುಧೀರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕಾಟೇರ’ ಸಿನಿಮಾದ ಶೂಟಿಂಗ್ ವೇಳೆಯೇ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇತ್ತು ಎಂದು ತರುಣ್ ಸುಧೀರ್​ ಹೇಳಿದ್ದಾರೆ.