ಗ್ರಾಮೀಣ ಭಾಗಗಳ ಬೆಳವಣಿಗೆಯ ದೃಷ್ಟಿಯನ್ನಿಟ್ಟುಕೊಂಡು ಇಂಡಿಯಾ ಸ್ಟಾರ್ಟ್ ಅಪ್ ಉತ್ಸವವನ್ನ ಹಮ್ಮಿಕೊಳ್ಳಲಾಗಿತ್ತು, ಸತ್ಯ ಸಾಯಿ ಆಶ್ರಮದಲ್ಲಿ ಅದ್ಧೂರಿ ಉತ್ಸವ ನಡೆಯಿತು. ರೈತ ದೇಶದ ಬೆನ್ನೆಲುಬು..ಹಳ್ಳಿಗಳು ದೇಶದ ಜೀವಾಳ.. ಭಾರತ ಅಭಿವೃದ್ಧಿ ಹೊಂದಬೇಕಾದ್ರೆ ಗ್ರಾಮೋದ್ಯೋಗದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಆಶ್ರಮದಲ್ಲಿ 2ನೇ ಆವೃತ್ತಿಯ ಇಂಡಿಯಾ ಸ್ಟಾರ್ಟ್ ಅಪ್ ಉತ್ಸವ ಹಮ್ಮಿಕೊಳ್ಳಲಾಗಿತ್ತು. 2 ದಿನಗಳ ಕಾಲ ನಡೆದ ಉತ್ಸವದಲ್ಲಿ ಬ್ರಿಟನ್, ಜಪಾನ್ ಸೇರಿದಂತೆ ಹಲವು ದೇಶಗಳು ಭಾಗಿಯಾಗಿದ್ವು. ಅಲ್ದೇ, 10ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಹಾಗೂ 500ಕ್ಕೂ ಹೆಚ್ಚು ಹೂಡಿಕೆದಾರರು ಪಾಲ್ಗೊಂಡಿದ್ರು.