ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ

ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಒಂದಿಬ್ಬರು ಮಂತ್ರಿಗಳು ಸರ್ಕಾರದ ಕಾರ್ಯವೈಖರಿ ಮತ್ತು ಅಧಿಕಾರಗಳ ದರ್ಪದ ಬಗ್ಗೆ ಅಸಮಾಧಾನ ಮತ್ತು ಅಸಹನೆ ವ್ಯಕ್ತಪಡಿಡುತ್ತಿರುವ ಜೊತೆಗೆ ವಿರೋಧ ಪಕ್ಷಗಳು ಎಡೆಬಿಡದೆ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಟೀಕೆಗಳನ್ನು ಮಾಡುತ್ತ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರೋದು ನಿಸ್ಸಂದೇಹವಾಗಿ ಸಿದ್ದರಾಮಯ್ಯರನ್ನು ದೃತಿಗೆಡಿಸಿದೆ.