ಹರೀಶ್ ಪೂಂಜಾಗೆ ಗ್ರಾಮಸ್ಥರಿಂದ ತರಾಟೆ

ದೇವರ ಹೆಸರಲ್ಲಿ ಜನರನ್ನು ಬ್ಲ್ಯಾಕ್​ಮೇಲ್ ಮಾಡಿದ ರಾಜ್ಯದ ಮೊದಲ ಶಾಸಕ ಹರೀಶ್ ಪೂಂಜಾ ಇರಬಹುದು. ಜನ ಇನ್ನೂ ನಿರಕ್ಷರಕುಕ್ಷಿಗಳು, ಹೆದರಿಸಿದರೆ ಹೆದರುತ್ತಾರೆ ಅಂತ ಅವರು ಈ ಜಮಾನದಲ್ಲೂ ಭಾವಿಸುತ್ತಿರುವುದು ಮೂರ್ಖತನದ ದ್ಯೋತಕವಾಗಿದೆ. ದೇವರು, ಧರ್ಮ, ನಂಬಿಕೆ ಮತ್ತು ಶ್ರದ್ಧೆ ವೈಯಕ್ತಿಕ ಸಂಗತಿಗಳು. ಅವುಗಳನ್ನು ಬಳಸಿ ಜನರನ್ನು ಹೆದರಿಸಲಾಗದು.