ಕಾರವಾರ: ಗ್ಯಾಸ್ ಸಿಲಿಂಡರ್ ಸಂಪರ್ಕ ಇಲ್ಲದೇ 6 ನಿಮಿಷಗಳ ಕಾಲ ಉರಿದ ಗ್ಯಾಸ್ ಸ್ಟವ್

ಇತ್ತೀಚೆಗೆ, ಹಸುವಿಗೆ ಆಹಾರ ನೀಡುವಾಗ ಕಾಂಪೌಂಡ್ ಮೇಲೆ ಆರಿದ್ದ ದೀಪವು ಹೊತ್ತಿ ಅಚ್ಚರಿ ಮೂಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ, ಗ್ಯಾಸ್ ಸಿಲಿಂಡರ್ ಸಂಪರ್ಕ ಇಲ್ಲದೇ 6 ನಿಮಿಷಗಳ ಕಾಲ ಗ್ಯಾಸ್ ಸ್ಟವ್ ಉರಿದು ಅಚ್ಚರಿ ಮೂಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜಮಖಂಡಿಯ ಅಲ್ಗೂರು ಬಸ್ತಿಯ ಮಸ್ಜಿದೇ ಅಬು ಹನೀಫಾ ಮಸೀದಿಯಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.