ಶಕ್ತಿ ಯೋಜನೆಯಿಂದ ನಷ್ಟ, ಬಸ್​ ಟಿಕೆಟ್​ ದರ ಏರಿಸುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕ

ರಾಜ್ಯ ಸರ್ಕಾರ ಇತ್ತೀಚಿಗೆ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆ ಏರಿಸಿತ್ತು. ಪೆಟ್ರೋಲ್​ ಬೆಲೆ 3 ರೂ. ಮತ್ತು ಡಿಸೇಲ್​ ಬೆಲೆ 3.50 ರೂಪಾಯಿ ಏರಿಕೆ ಮಾಡಿತ್ತು. ಇದು ರಾಜ್ಯದ ಜನರಿಗೆ ಆಘಾತ ಉಂಟು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ.