ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ

ವೈಲ್ಡ್​ ಕಾರ್ಡ್ ಮೂಲಕ ರಜತ್ ಮತ್ತು ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಮೊದಲ ದಿನವೇ ಅವರಿಗೆ ವಿಶೇಷ ಅಧಿಕಾರ ಸಿಕ್ಕಿದೆ. ಅಡುಗೆ ಮನೆಯ ಉಸ್ತುವಾರಿಯಾಗಿ ಅವರಿಬ್ಬರು ನೇಮಕ ಆಗಿದ್ದಾರೆ. ಸ್ಪರ್ಧಿಗಳ ಪೈಕಿ ಯಾರು, ಯಾವ ಅಡುಗೆ ಮಾಡಬೇಕು ಎಂಬುದನ್ನು ಶೋಭಾ ಶೆಟ್ಟಿ ಮತ್ತು ರಜತ್ ಅವರು ನಿರ್ಧಾರ ಮಾಡಿದ್ದಾರೆ.