ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎಣ್ಣೆ ಪಾರ್ಟಿ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿನ ಕರ್ಮಕಾಂಡವನ್ನು ‘ಟಿವಿ9’ ಬಟಾಬಯಲು ಮಾಡಿತ್ತು. ಜೈಲೊಳಗಡೆ ಐಷಾರಾಮಿ ಜೀವನ ನಡೆಸುತ್ತಿರುವುದನ್ನು ಸಾಕ್ಷಿ ಸಮೇತ ಬಿಚ್ಚಿಟ್ಟಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಅದೇ ಜೈಲಿನ ಮತ್ತೊಂದು ಕರ್ಮಕಾಂಡದ ವಿಡಿಯೋ ಬಹಿರಂಗಗೊಂಡಿದೆ.