ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸಿದ ರಜತ್-ಉಗ್ರಂ ಮಂಜು

ರಜತ್​ ವಿರುದ್ಧ ಉಗ್ರಂ ಮಂಜು ಕೆಂಡಾಮಂಡಲ ಆಗಿದ್ದಾರೆ. ಪ್ರತಿ ಟಾಸ್ಕ್​ ಆಡುವಾಗಲೂ ರಜತ್ ಕಿರಿಕ್ ಮಾಡುತ್ತಾರೆ. ಅಲ್ಲದೇ ಗೌತಮಿ ಜಾದವ್​ ಜೊತೆ ಇತ್ತೀಚೆಗಿನ ಸಂಚಿಕೆಯಲ್ಲಿ ರಜತ್ ಅವರು ಹದ್ದು ಮೀರಿ ಮಾತನಾಡಿದ್ದರು. ಈಗ ರಜತ್ ಮತ್ತು ಉಗ್ರಂ ಮಂಜು ಅವರು ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದಾರೆ. ಡಿ.17ರ ಸಂಚಿಕೆಯ ಪ್ರೋಮೋ ಇಲ್ಲಿದೆ.