ಮಕ್ಕಳ ಕೈಗೆ ಕಟ್ಟಿದ್ದ ರಾಖಿಗಳನ್ನು ತೆಗೆಸಿದ ಖಾಸಗಿ ಶಾಲೆ ಶಿಕ್ಷಕರು

ಮಕ್ಕಳ ಕೈಗೆ ಕಟ್ಟಿದ್ದ ರಾಖಿಗಳನ್ನು ಮೈಸೂರಿನ ಜಗನ್ಮೋಹನ ಅರಮನೆ ಬಳಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ಶಿಕ್ಷಕರು ತೆಗೆಸಿರುವ ಆರೋಪ ಕೇಳಿಬಂದಿದ್ದು, ಶಾಲೆ ಮುಂದೆ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಸ್ಥಳೀಯ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಸಾಥ್ ನೀಡಿದ್ದಾರೆ.