ದೆಹಲಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಈ ವೇಳೆ ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮ್ ಆದ್ಮಿ ಸರ್ಕಾರ ಮಾಡಿದ ಅಪ್ರಮಾಣಿಕ ಪ್ರಯತ್ನಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಎಎಪಿ ಸರ್ಕಾರ 9ನೇ ತರಗತಿಯ ನಂತರ ಮಕ್ಕಳನ್ನು ಮುಂದೆ ಹೋಗಲು ಬಿಡುವುದಿಲ್ಲ. ಅವರು ಉತ್ತೀರ್ಣರಾಗುವುದು ಖಚಿತವಾದ ಮಕ್ಕಳಿಗೆ ಮಾತ್ರ ಮುಂದಿನ ತರಗತಿಗೆ ಹೋಗಲು ಅವಕಾಶ ನೀಡುತ್ತಾರೆ. ಅವರು ಒಂದುವೇಳೆ ಫೇಲ್ ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ ಎಂದು ಮೋದಿ ಟೀಕಿಸಿದ್ದಾರೆ.