ಮಳೆ ಬಾರದ ಪ್ರತಿವರ್ಷವೂ ಕಾವೇರಿ ಸಮಸ್ಯೆ ಬರುತ್ತದೆ. ಸಮಸ್ಯೆ ಬಂದಾಗ ನಟರನ್ನು ಕರೆಯುತ್ತೀರ, ನಟರು ಬಂದಿಲ್ಲ ಅಂದ್ರೆ ದ್ರೋಹಿ ಕೆಟ್ಟವನು ಎಂದೆಲ್ಲ ಕಮೆಂಟ್ ಮಾಡುತ್ತಾರೆ. ಭಾಷಣ ಮಾಡಿದರೆ ನಿಲ್ಲಿಸುತ್ತಾರಾ. ಅದೆಲ್ಲ ಕಾನೂನು ಸಮಸ್ಯೆ, ರಾಜ್ಯ ಸರ್ಕಾರ ತಪ್ಪು ಮಾಡಿದೆ. ಮೊದಲು ನೀರು ಬಿಟ್ಟು ಬಳಿಕ ಸರ್ವ ಪಕ್ಷ ಸಭೆ ಮಾಡಿದರು. ನೀವು ತಪ್ಪು ಮಾಡಿ, ಬಳಿಕ ಅದನ್ನು ಬೇರೆಯವರಿಗೆ ಒರೆಸುವ ಕಾರ್ಯ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಅದು ತಪ್ಪು ಎಂದರು ಜಗ್ಗೇಶ್