ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅವರು ಕೂಡ ರಾಜಕೀಯ ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. ಆದರೆ, ಅವರಿಗೆ ರಾಜಕೀಯ ಸೇರುವ ಯಾವುದೇ ಆಲೋಚನೆ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಒಳ್ಳೆಯ ಕೆಲಸ ಮಾಡುವವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಅಷ್ಟೇ. ಭೀಮಣ್ಣ ನಮಗೆ ಸಂಬಂಧಿಕರು. ಜಗದೀಶ್ ಶೆಟ್ಟರ್ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಆದರೆ, ರಾಜಕೀಯ ಸೇರುವ ಆಲೋಚನೆ ಇಲ್ಲ’ ಎಂದಿದ್ದಾರೆ ಅವರು.