ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದ ಕರ್ಜಗಿಯ ಕಾರಹುಣ್ಣಿಮೆಯ ಬಂಡಿ ಉತ್ಸವದಲ್ಲಿ ಅವಘಡ ಸಂಭವಿಸಿದೆ. ಜನಸ್ತೋಮದ ನಡುವೆ ಬಂಡಿ ಸಹಿತ ಓಡುತ್ತಿದ್ದ ಎತ್ತುಗಳು ಜನರಿಗೆ ತಾಗಿಕೊಂಡು ಓಡಿದೆ. ಈ ವೇಳೆ ಬಂಡಿ ವ್ಯಕ್ತಿಯೊಬ್ಬರ ಕಾಲಿನ ಮೇಲೆ ಹರಿದು ಹೋಗಿದೆ. ಗಾಯಾಳುವನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.