ಸಿದ್ದರಾಮಯ್ಯ ಹೊರಡಲು ಅಣಿಯಾದಾಗ ಶಿವಕುಮಾರ್ ಕಾರ್ಯಕರ್ತರಿಗೆ ಏನೂ ಹೇಳಲೇ ಇಲ್ಲವಲ್ಲ ಅನ್ನುತ್ತಾ ಅವರು ಕೈ ಹಿಡಿದು ಕೂರಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಸಿದ್ದರಾಮಯ್ಯ ನೀವು ಅಧ್ಯಕ್ಷರಾಗಿದ್ದೀರಿ, ನೀವೇ ಹೇಳಬೇಕು ಅಂದಾಗ ಇಬ್ಬರೂ ನಗುತ್ತಾರೆ. ನಂತರ ಇಬ್ಬರ ನಡುವೆ ಆತ್ಮೀಯವಾಗಿ ಒಂದಷ್ಟು ಮಾತುಕತೆ ನಡೆದ ಮೇಲೆ ಸಿದ್ದರಾಮಯ್ಯ ಅಲ್ಲಿಂದ ಹೊರಡುತ್ತಾರೆ.