ಯತ್ನಾಳ್ ಎಲ್ಲಿದ್ದಾರೆ ಅಂತ ಪತ್ತೆಯಾಗಿದೆ, ಅಸಲಿಗೆ ಅದು ಪತ್ತೆಯಲ್ಲ, ತಮ್ಮ ಲೊಕೇಶನ್ ಅನ್ನು ಖುದ್ದು ಯತ್ನಾಳ್ ಶೇರ್ ಮಾಡಿದ್ದಾರೆ! ವಿಜಯಪುರ ನಗರಕ್ಕೆ ಹತ್ತಿರದಲ್ಲಿರುವ ಕಗ್ಗೋಡ ಎಂಬಲ್ಲಿ ಒಂದು ಗೋರಕ್ಷಾ ಕೇಂದ್ರವಿದ್ದು ಶಾಸಕರು ಅಲ್ಲಿದ್ದಾರೆ ಮತ್ತು ಗೋಸೇವೆಯಲ್ಲಿ ತೊಡಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.