ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳಿವು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಮಂಗಳವಾರ ಇದ್ದಕ್ಕಿದ್ದಂತೆ ಉಗ್ರರು ದಾಳಿ ನಡೆಸಿದ್ದರು. ಓಡಿ ಹೋಗಿ ತಪ್ಪಿಸಿಕೊಳ್ಳಲೂ ಆಗದಂತಹ ಸ್ಥಳ ಅದಾಗಿದ್ದರಿಂದ 26 ಜನರು ಗುಂಡೇಟಿಗೆ ಬಲಿಯಾಗಿದ್ದರು. ಅವರಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯೂ ಒಬ್ಬರು. ಅವರು ತಮ್ಮ ಪತ್ನಿ ಮತ್ತು ಮಗಲನ ಜೊತೆ ಪಹಲ್ಗಾಮ್​ಗೆ ಹೋಗಿದ್ದಾಗ ರೀಲ್ಸ್ ಮಾಡಿದ್ದರು. ಆ ವಿಡಿಯೋ ಚಿತ್ರೀಕರಿಸಿದ ನಂತರ ಸ್ವಲ್ಪ ಹೊತ್ತಿನಲ್ಲೇ ಅವರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಮಂಜುನಾಥ್ ತಮ್ಮ ಕುಟುಂಬದ ಜೊತೆ ಎಂಜಾಯ್ ಮಾಡುತ್ತಾ ಪಹಲ್ಗಾಮ್​ನಲ್ಲಿ ಸಂತೋಷದ ಕ್ಷಣಗಳನ್ನು ಕಳೆದ ವಿಡಿಯೋ ಇಲ್ಲಿದೆ.