ಗುರುಗ್ರಾಮ್ದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸೆಲ್ ನೀಡಲು ಬಂದು ಮನೆಯ ಹೊರಗಿದ್ದ ಒಂದು ಜತೆ ಶೂವನ್ನು ಎಗರಿಸಿದ್ದಾನೆ. ಇದೀಗ ಈ ಕೃತ್ಯದ ಬಗ್ಗೆ ಒಂದು ವಿಡಿಯೋ ವೈರಲ್ ಆಗಿದೆ. ಏಪ್ರಿಲ್ 9ರಂದು ಈ ವಿಡಿಯೋವನ್ನು ಎಕ್ಸ್ನಲ್ಲಿ ರೋಹಿತ್ ಅರೋರಾ ಎಂಬುವವರು ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತನ ಮನೆಯ ಹೊರಗೆ ಇದ್ದ ಕಪ್ಪು ಬಣ್ಣದ ನೈಕ್ ಶೂವನ್ನು ಸ್ವಿಗ್ಗಿ ಇನ್ಸ್ಟಾಮಾರ್ಟ್ ಡೆಲಿವರಿ ಎಕ್ಸಿಕ್ಯೂಟಿವ್ ಕದ್ದಿದ್ದಾನೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.