ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಎಮ್ಯುಡಿಎ) ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಪರಿವರ್ತಿಸಿದ್ದಕ್ಕೆ ದೇವೇಗೌಡ ಮುಖ್ಯಮಂತ್ರಿಯವರನ್ನು ಕೊಂಡಾಡಿದರು. ಮೈಸೂರು ಜಿಲ್ಲೆಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಮಾಡಬೇಕಿದೆ, ಅದು ಸಿದ್ದರಾಮಯ್ಯನವರ ಅವಧಿಯಲ್ಲೇ ಆಗಬೇಕು, ಬೇರೆ ಯಾರೇ ಮುಖ್ಯಮಂತ್ರಿಯಾದರೂ ಅದು ಸಾಧ್ಯವಾಗೋದಿಲ್ಲ ಎಂದು ದೇವೇಗೌಡ ಹೇಳಿದರು.