ಜೆಡಿಎಸ್ ನಾಯಕರನ್ನು ಕಾಂಗ್ರೆಸ್ಗೆ ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ನಾಯಕರು ತೊಡಗಿರುವುದು ಖಂಡಿತ ಗಾಳಿಸುದ್ದಿಯಲ್ಲ. ಇದರ ಸುಳಿವು ಕುಮಾರಸ್ವಾಮಿಗೆ ಮೊದಲಿಂದಲೂ ಇದೆ. ಗುರುಮಠಕಲ್ ಶಾಸಕ ಶರಣಗೌಡ ಕಂದ್ಕೂರ್ ಜೆಡಿಎಸ್ ಪಕ್ಷವನ್ನು ಹೆಚ್ಚುಕಡಿಮೆ ತೊರೆದೇಬಿಟ್ಟಿದ್ದರು. ನಿಖಿಲ್ ಕುಮಾರಸ್ವಾಮಿಯನ್ನು ರಾಜ್ಯಾಧ್ಯಕ್ಷ ಮಾಡುವ ಮಾತಿನಿಂದಲೂ ಜೆಡಿಎಸ್ ನಾಯಕರು ಅಸಮಾಧಾನಗೊಂಡಿದ್ದಾರೆ.